ಭೂಮಿಯ ಎಲ್ಲ ಕಡೆಯ ಜನರ ಜೀವನದ ಮೇಲೆ ಒಳ್ಳೆಯ ರೀತಿಯ ಪರಿಣಾಮ ಬೀರಿ.
ಅವರ ಖುಷಿಯ ಮೂಲವಾಗಿ.



ನಾವು ಯಾವುದಕ್ಕೆ ಹೆಸರುವಾಸಿಯಾಗಿದ್ದೇವೆಂದು ತಿಳಿಯಿರಿ

ಪರಿಶುದ್ಧವಾದ ಜಾಗತಿಕ-ಗುಣಮಟ್ಟದ ಸಾಂಬಾರ ಪದಾರ್ಥಗಳು, ಗೃಹೋತ್ಪನ್ನಗಳು ಮತ್ತು ನಮ್ಮ ಗ್ರಾಹಕರು ಆನಂದಿಸುವ ಅಸಾಧಾರಣವಾದ ಗ್ರಾಹಕ-ಸೇವೆಯನ್ನು ಒದಗಿಸುತ್ತಿರುವುದಕ್ಕಾಗಿ ನಾವು ಹೆಸರುವಾಸಿ. ಪರಿಶುದ್ಧತೆಯ ಬಗ್ಗೆ ರಾಜಿ ಇಲ್ಲದ ನಿಲುವು ಮತ್ತು ಸಂಪೂರ್ಣ ಗ್ರಾಹಕರ ಸಂತೃಪ್ತಿ ಇವು ನಮ್ಮಲ್ಲಿ ಚಾಚೂತಪ್ಪದೇ ಅನುಷ್ಟಾನದಲ್ಲಿರುವ ತತ್ವ.



ನಾವು ಯಾರೆಂದು ತಿಳಿಯಿರಿ

ಇದೊಂದು ಶೃಂಗೇರಿ ಪಟ್ಟಣದಲ್ಲಿ ಮೂವತ್ತು ವರ್ಷಕ್ಕೂ ಹೆಚ್ಚಿನ ಸಮಯದಿಂದ ನಡೆಸಿಕೊಂಡು ಬಂದಿರುವ ಸಣ್ಣ ಗೃಹ ಉದ್ಯಮ. ನಾವು ಪರಿಶುದ್ಧವಾದ ಗೃಹೊತ್ಪನ್ನಗಳನ್ನು ಪ್ರಪಂಚದೆಲ್ಲೆಡೆ ತಲುಪಿಸುತ್ತಿದ್ದೇವೆ. ಕಳೆದ ಮೂವತ್ತು ವರ್ಷಗಳಲ್ಲಿ 20-30 ಲಕ್ಷಕ್ಕೂ ಹೆಚ್ಚಿನ ಭೋಜನಗಳ ಭಾಗವಾಗಿರೋದು ಅಗಾಧವಾದ ಆನಂದದ ವಿಷಯ.



ಕೆಲಸದ ಸಂಸ್ಕೃತಿ ಮತ್ತು ವಾತಾವರಣ ತಿಳಿಯಿರಿ

ಕೆಲಸದ ಸಂಸ್ಕೃತಿ: ಗ್ರಾಹಕರ ಸಂತೃಪ್ತಿಯು ನಮ್ಮಲ್ಲಿ ಅತಿ ಮುಖ್ಯವಾದ ಆದ್ಯತೆಯಾದ್ದರಿಂದ, ಎದುರಾಗುವ ಸವಾಲುಗಳನ್ನು ದಾಟಲು ನಾವು ಧನಾತ್ಮಕ ವಿಧಾನಗಳನ್ನು ಬಳಸುತ್ತೇವೆ.

ಕೆಲಸದ ವಾತಾವರಣ: ಇದೊಂದು ಗೃಹೋದ್ಯಮವಾದ್ದರಿಂದ ಇಲ್ಲಿನ ವಾತಾವರಣ ಅನೌಪಚಾರಿಕವಾಗಿ ಮತ್ತು ಒತ್ತಡ-ರಹಿತವಾಗಿದೆ.



ಸಿಂಹಾಸ್'ನಲ್ಲಿನ ಪ್ರಯೋಜನಗಳನ್ನು ತಿಳಿಯಿರಿ

ಸಂಬಳದ ಹೊರತಾಗಿ, ನಮ್ಮಲ್ಲಿನ ಹೆಚ್ಚಿನ ನೌಕರರು ಎಲ್ಲ ದಿಕ್ಕುಗಳಿಂದಲೂ ಆಗಮಿಸುವ ಜನರೊಂದಿಗೆ ಮಾತನಾಡುವ ಅವಕಾಶ ಪಡೆದು, ಹೊಸ ವೃತ್ತಿಕೌಶಲ್ಯಗಳು, ಹೊಸ ಭಾಷೆಗಳು ಮತ್ತು ವೈಯುಕ್ತಿಕ ಜೀವನದಲ್ಲಿ ಸಹಾಯಕ್ಕೆ ಬರುವ ಅಮೂಲ್ಯವಾದ ಸಂವಹನದ ಕಲೆಯನ್ನು ಕಲಿಯುತ್ತಾರೆ. ಒಂದು ವರ್ಷದ ನಂತರ ಗಮನಿಸಿದಾಗ, ನಮ್ಮ ನೌಕರರು ಇನ್ನೂ ಉತ್ತಮವಾದ ಮತ್ತು ಹೆಚ್ಚು ಸುಧಾರಿತವಾದ ಅವರ ವ್ಯಕ್ತಿತ್ವದ ಬಗ್ಗೆ ಹೆಮ್ಮೆಪಡುತ್ತಾರೆ.